Saturday, August 8, 2009

ಶುಭಾರಂಭ

ಎಲ್ಲದಕ್ಕೂ ಒಂದು ಶುಭಾರಂಭ ಇರುವಂತೆ ಈ ನನ್ನ "ಬ್ಲಾಗ್" ಏನಂತಾರೆ ಅದನ್ನು ಕನ್ನಡದಲ್ಲಿ ಬರಯಬೇಕೆಂಬ ನನ್ನ ಆಸೆಯು ಈ ದಿನ ಶುಭಾರಂಭ ಕಂಡಿತು. ಈ ರೀತಿಯ ಆಸೆ ಪಡುವುದು ಕಷ್ಟವಾಗಿರಲಿಲ್ಲ ಅಥವಾ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟ ಅನಿಸಲಿಲ್ಲ. ನನ್ನ ಮುಂದಿರುವ ದೊಡ್ಡ ಸವಾಲು ಒಂದೇ, ಇದನ್ನು ಈಗೆಯೇ ಎಷ್ಟು ದಿನ ಅಥವಾ ತಿಂಗಳು ಅಥವಾ ವರ್ಷಗಳವರೆಗೂ ಮುಂದುವರಿಸುವೆನೆಂದು..!!!
ನನ್ನ ಈ ಕನಸನ್ನು ಜೀವಂತವಾಗಿಡಲು ಏನು ಮಾಡಬೇಕು, ನನ್ನ ಈ ಸಮಸ್ಯೆಗೆ ಪರಿಹಾರವಾದರೂ ಏನು ಎಂದು ಯೋಚಿಸ ತೊಡಗಿದ ನನಗೆ ನನ್ನ ಕಣ್ಣ ಮುಂದೆ ಕಂಡದ್ದು ಒಂದೇ ಉತ್ತರ. ಈ ಕನಸನ್ನು ಒಂದು ದಿನ ಕಂಡರೆ ಸಾಲದು, ಅದನ್ನು ಮತ್ತೆ ಮತ್ತೆ ಕಾಣಬೇಕೆಂದು. ಅಂದರೆ ಇದನ್ನು ನಾನು ಹವ್ಯಾಸವನ್ನಾಗಿ ಮಾಡಿಕೊಂಡರೆ?. ಹೌದು, ಇದು ನನ್ನ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಕಂಡಿತು.
ಮನೋವಿಜ್ಞಾನದ ಪ್ರಕಾರ ಯಾರಾದರು ಒಂದು ಕನಸನ್ನು ಕಂಡರೆ ಅದರ ಹಿಂದೆ ಒಂದು ಕಾರಣ ಇರುತ್ತದೆ. ಆ ಕನಸ್ಸಿನಲ್ಲಿ ನೆಡೆಯುವ ಒಂದೊಂದು ಸನ್ನಿವೇಶಕ್ಕೂ ಒಂದು ಕಾರಣ ಇರುತ್ತದೆ. ನಾನು ಕನ್ನಡದಲ್ಲಿ ಬ್ಲಾಗ್ ಬರೆಯಲು, ನನ್ನ ಕನ್ನಡದ ಮೇಲಿನ ಪ್ರೇಮ, ಗೌರವವೇ ಕಾರಣ. ಹಾಗಂತ ನನ್ನ ಜೀವ, ಪ್ರಾಣ ಕನ್ನಡಕ್ಕೆ ಮೀಸಲು ಎಂದು ಹೇಳಲು ನಾನೇನು ರಾಜಕಾರಣಿಯೂ ಅಲ್ಲ ಅಥವಾ ಯಾವುದೇ ಕನ್ನಡ ಸಂಘದ ಹೋರಾಟಗಾರನು ಅಲ್ಲ. ನನ್ನ ಈ ಕನ್ನಡ ಪ್ರೇಮವನ್ನು ಜೀವಂತವಾಗಿಡಲು ಇದು ಒಂದು ಮಾರ್ಗವೆಂದು ಎಂದು ಭಾವಿಸಿದ್ದೇನೆ. ನಾನು ಓದಿದ ಕಥೆ, ಕಾದಂಬರಿಗಳೆಲ್ಲಾ ಮುಖ್ಯವಾಗಿ ಕನ್ನಡದಲ್ಲಿ ಇದ್ದದರಿಂದ ಈ ರೀತಿಯ ಕನಸ್ಸು ಕಾಣಲು ಸಾಧ್ಯವಾಯಿತೆಂದು ಅಂದುಕೊಂಡಿದ್ದೇನೆ.ಎಲ್ಲದಕ್ಕೂ ಒಂದು ಕಾರಣ ಇರುವಂತೆ ಇದು ಒಂದು ಕಾರಣ.
ನನ್ನ ಮೊದಲನೇ ಕನ್ನಡದ ಬ್ಲಾಗ್(ಇಂಗ್ಲೀಷನಲ್ಲಿ ಈ ಹಿಂದೆ ಬರೆದಿದ್ದೇನೆ) ಬರೆಯಲು ಶುರುಮಾಡಿದಾಗ ನನಗೆ ನಾನು ಹಾಕಿಕೊಂಡ ಪ್ರಶ್ನೆಎಂದರೆ... ಯಾರಾದರು ಇದನ್ನು ಓದುವರೆ? ನಾನು ನನ್ನ ಈ ಸಮಯವನ್ನು ಒಂದು ಕನ್ನಡ ಪುಸ್ತಕ ಓದಲು ಏಕೆ ಉಪಯೂಗಿಸಿಕೊಳ್ಳಬಾರದು.? ಆಥವಾ ಬೇರೇನಾದರು ಏಕೆ ಮಾಡಬಾರದು.? ನನ್ನ ಈ ಬ್ಲಾಗನ್ನು ಕೇವಲ ಇಂಟರ್ನೆಟ್ ಇರುವವರು ಓದಲು ಸಾಧ್ಯ.... . ಆದರೆ ಆ ಪೈಕಿ ಎಷ್ಟು ಜನ ಕನ್ನಡದ ಬರಹಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ.? ದುಡ್ಡು, ಯಶಸ್ಸನ್ನು ಹಗಲು ಎನ್ನದೇ, ರಾತ್ರಿ ಎನ್ನದೇ ಅಟ್ಟಿಸಿಕೊಂಡು, ಅವುಗಳ ಹಿಂದೆ ಬಿದ್ದಿರುವ ಈ ಜನರಿಗೆ ಅಷ್ಟಾದರೂ ಸಮಯ ಇದೆಯೇ.?
ಈ ಪ್ರಶ್ನೆ ತುಂಬಾ ಹೊತ್ತು ಪ್ರಶ್ನೆಯಾಗಿ ಉಳಿಯಲಿಲ್ಲ. ನಾನೇ ನನ್ನ ಪ್ರಶ್ನೆಗೆ ಉತಾರವಾಗಿ ನಿಂತೆ. ನನ್ನಂತ ಸಾವಿರಾರು ಜನ ಕನ್ನಡ ಪ್ರಿಯರಿದ್ದಾರೆ ಎಂದು ಕಂಡುಕೊಳ್ಳಲು ತುಂಬಾ ಸಮಯ ಹಿಡಿಯಲಿಲ್ಲ.
ಈ ಎಲ್ಲಾ ಆಲೋಚನೆಗಳನ್ನು ತಲೆಯೊಳಗೆ ತುಂಬಿಕೊಂಡೆ ನನ್ನ ಈ ಬರಹವನ್ನು ಕನ್ನಡಕ್ಕೆ ಸಮಯವಿಲ್ಲದ ಜನರ ಮಧ್ಯೆ ಅವರದೇ ಪ್ರಪಂಚದಲ್ಲಿ ಈ-ಜಾಲದ ಮೂಲಕ ತೇಲಿ ಬಿಡುತ್ತಿದ್ದೇನೆ.
ಸಮಯ ಸಿಕ್ಕಾಗಲೆಲ್ಲ ಈ ನನ್ನ ಹವ್ಯಾಸಕ್ಕೆ ಜೀವ ತುಂಬುತ್ತಿರುತ್ತೇನೆ...

No comments:

Post a Comment