ನೆನ್ನೆ ನನ್ನ ಗೆಳೆಯನೊಬ್ಬನ ಮದುವೆಯ reception ಗೆ ಪರಿವಾರ ಮತ್ತು ಇನ್ನಿತರ ಗೆಳೆಯರೊಟ್ಟಿಗೆ ಹೋಗಿದ್ದೆ. ಇದು ಇನ್ನಿತರ reception ಗಿಂತ ಭಿನ್ನವಾಗಿತ್ತು, ಕಾರಣ ಅದು ಒಂದು ಅಂತರ್ ಜಾತಿಯ ಮದುವೆಯ reception ಆಗಿತ್ತು. ಈ ತರಹದ ಮದುವೆಗಳು ಈಗಿನ ಕಾಲದಲ್ಲಿ ಹೊಸದೇನಲ್ಲ, ಆದರೂ ಈ ಮದುವೆಯ receptionನಲ್ಲಿ ಬೇರೊಂದು ರೀತಿಯ ಅನುಭವ ಕಾದಿತ್ತು.
ನನಗೆ ಮೊದಲಿಂದಲೂ ಮದುವೆ ಗಂಡು ಮತ್ತು ಹುಡುಗಿಯ ಪರಿಚಯವಿತ್ತು. ಹುಡುಗ ಮುಸಲ್ಮಾನ ಮತ್ತು ಹುಡುಗಿ ಹಿಂದೂ. ಅವರ reception ಒಂದು ಹೋಟೆಲಿನಲ್ಲಿ ಇತ್ತು. ಆ ಹೋಟೆಲಿನಲ್ಲಿ ಅಂದು ಇದೊಂದೆ ಅಲ್ಲದೆ ಬೇರೊಂದು ಮದುವೆಯ reception ಸಹ ನಡೆಯುತ್ತಿತ್ತು. ಈ ಕಾರಣ ಹೋಟೆಲಿನ entranceನಲ್ಲಿ ಗಂಡು ಹೆಣ್ಣುಗಳ ಹೆಸರನ್ನು ಹಾಕಿ ಹಾಲ್ ಗಳ ಹೆಸರನ್ನು ಹಾಕಿದ್ದರು. ನನಗೆ ಆಶ್ಚರ್ಯ ಆದದ್ದೇ ಅಲ್ಲಿ. ಹುಡುಗನ ಹೆಸರೇನೋ ಸರಿಯಾಗಿತ್ತು, ಆದರೆ ಹುಡುಗಿಯ ಹೆಸರು...?
ಹುಡುಗಿಯ ಹೆಸರನ್ನು ಬದಲಾಯಿಸಿದ್ದರು...ಕ್ಷಮಿಸಿ ಅದಲು ಬದಲು ಅಲ್ಲ.. ಆ ಹುಡುಗಿ ಹಿಂದೂ ಆದ ಕಾರಣ ಹುಡುಗಿಯ ಹೆಸರನ್ನು ಬದಲಾಯಿಸಿ ಒಂದು ಮುಸಲ್ಮಾನ ಹುಡುಗಿಯ ಹೆಸರಾಗಿ ಬದಲಾಯಿಸಿದ್ದರು. ಹುಡುಗಿ ಮಾತ್ರ ಅವಳೇ..!!
ಹುಡುಗಿಗೆ ಮದುವೆಯಾಗಲು ಹಾಕಿದ್ದ ಷರತ್ತು ಅದಾಗಿತ್ತು..ಜಾತಿ ಮಾತು ಹೆಸರು ಬದಲಾವಣೆ. ಪ್ರೀತಿಗೆ ಯಾಕಿ ಜಾತಿಯ ಬೇಲಿ.? ಪ್ರೀತಿಮಾಡಿದ ಮಸನ್ನುಗಳಿಗೆ ಯಾಕಿ ಷರತ್ತು? ಇದೊಂದು ಉತ್ತರ ಸಿಗದ, ನಮಗೆ ನಾವ ಹಾಕಿಕೊಳ್ಳಬೇಕಾದ ಪ್ರಶ್ನೆ. ಇದೊಂದು ಜಾತಿಗೆ ಹಾಕಬೇಕಾದ ಪ್ರಶ್ನೆ ಅಲ್ಲ.. ಇಡೀ ಸಮಾಜಕ್ಕೆ ಹಾಕಬೇಕಾದ ಪ್ರಶ್ನೆ. ಪ್ರೀತಿಸಿದ ಹೃದಯಗಳು ತಮ್ಮ ಪ್ರೀತಿಯ ಉಳಿವಿಗಾಗಿ ಏನು ತ್ಯಾಗ ಮಾಡಲು ಸಿದ್ದ ಎಂದು ತೋರಿಸಿದ್ದರು. ಅವರ married life ಸುಖ ಸಂತೋಷದಿಂದ ಕೂಡಿರಲಿ.
ಹುಡುಗಿಯ ತಂದೆ ತಾಯಿ ಸಹ ಅದೇ entrance ಇಂದ ಒಳಬಂದದ್ದು ಗಮನಿಸಿದೆ. ಅವರು ತಮ್ಮ ಮಗಳಿಗೆ ಪ್ರೀತಿಯಿಂದ ಇಟ್ಟ ಹೆಸರು ಬದಲಾವಣೆಯಾಗಿದ್ದು ನೋಡಿ ಅವರಿಗಾದ ಅನುಭವವೇನೋ..? hmm.. ಅಸಾಧ್ಯ.
Subscribe to:
Post Comments (Atom)
No comments:
Post a Comment